ನಾ ಕಂಡಂತೆ "ಮುಂದಿನ ನಿಲ್ದಾಣ" ಸಿನಿಮಾ


ನಾ  ಕಂಡಂತೆ "ಮುಂದಿನ ನಿಲ್ದಾಣ"  ಸಿನಿಮಾ  


 ಜೀವನದಲ್ಲಿ  ಹಲವಾರು ಬಾರಿ   ನಿರ್ಧಾರ ತೆಗೆದುಗೊಳ್ಳುವ ಸಂಧರ್ಭ ದಲ್ಲಿ  ಎಡವಿದ್ರೆ  ಅಥವಾ  ತುಂಬಾ  ವಿಳಂಬಿಸಿದರೆ  ಪುನಃ   ಅದೇ ಅವಕಾಶ   ಮತ್ತೆ ಬರುತ್ತದೆ  ಎಂಬ ನಿರೀಕ್ಷೆ ಕಷ್ಟ . ಅದನ್ನೇ ಪರಿತಪಿಸಿ ಪ್ರಯೋಜನ ವಿಲ್ಲ ಇನ್ನೊಮ್ಮೆ   ಎಚ್ಚುತ್ತು ಕೊಳ್ಳಬೇಕುಎಂಬುದನ್ನ  ಪ್ರಬುದ್ಧವಾಗಿ  ಚಿತ್ರದಲ್ಲಿ ತೋರಿಸಲಾಗಿದೆ ..

ಗುರಿ ತಲುಪಲು  ಒಂದು  ನಿಲ್ದಾಣದಲ್ಲಿ  ಬಸ್ಸು  ತಪ್ಪಿತೆಂದು  ಅಲ್ಲೇ ಕೂರುವುದಕ್ಕಿಂತ   ಮುನ್ನಡೆದು ಇನ್ನೊಂದು  ನಿಲ್ದಾಣದಲ್ಲಿ   ಸಿಕ್ಕ  ಬಸ್ಸನ್ನು  ಆಯ್ಕೆ  ಮಾಡಬಹುದೆಂಬ ಸಲಹೆ ಕೊಟ್ಟಿದೆ ಈ ಚಿತ್ರ.

  ನಾಲ್ಕು ಫೈಟ್ +  ಎರಡು ಲವ್ ಸೀನು+ ಮಸಾಲೆ   ಸಂಭಾಷಣೆ +ಒಂದತ್ತು  ಡಬ್ಬಲು  ಮೀನಿಂಗ್  ಜೋಕ್ ಗೇ   ಸೀಮಿತ ವಾದ  ಕನ್ನಡ  ಸೀನಿಮಾಕೆ 
ಸಿನಿಮಾ ಅಂದರೆ  ಹೀಗೂ ಹೊಸ  ಸೂತ್ರ  ವನ್ನ  ತುಂಬ  ಬಹುದೆಂದು ಈ  ಚಿತ್ರ ತಂಡ  ತೋರಿಸಿದೆ

 ಇಂದಿನ  ಯುವಕರ  ಜೀವನ  ಮತ್ತು  ಗೊಂದಲವನ್ನು  ಎತ್ತಿ ತೋರಿಸಿದೆ . ಮತ್ತು ಅದಕ್ಕೆ  ಪ್ರಬುಧ್ಧ ವಾಗಿ  ಉತ್ತರವನ್ನ  ಕೊಟ್ಟಿದೆ.

ಕನ್ನಡ ಸಂಭಾಷಣೆಯಲ್ಲಿ   ಸರಳತೆ ಇದೆ . ಸಿನೆಮಾದಲ್ಲಿ  ಕನ್ನಡತೆ ಇದೆ. ಮಧುರವಾದ  ಸಂಗೀತವಿದೆ. ಪರಿಣತ ತಂತಜ್ಞರ  ಕೈ  ಚಳಕ  ಕಾಣಬಹುದು.

ಒಟ್ಟಿನಲ್ಲಿ  ಲಾಂಗು  ಮಚ್ಚು ,ಎನ್ನಡ, ಮಚ್ಚ ,ಕರ್ಕಶ  ಸೌಂಡ್    ಇಂತದ್ದೆಲ್ಲಾ  ಬಿಟ್ಟು   ಮನೆಮಂದಿ ಎಲ್ಲಾ  ಕೂತು  ನೋ ಡಬಹುದಾದ  ಸಿನೆಮಾ  ನಿಮ್ಮ ೯೦ ನಿಮಿಷ ಸಮಯ ಈ ಸಿನಿಮಾಕೆ  ಕೊಟ್ಟರೆ   ಉಪಯುಕ್ತ.

ಮದುವೆ  ಅಂದರೆ ಏನು, ಲಿವಿಂಗ್ ಇನ್ ರಿಲೇಶನ್  ಅಂದರೆ ಏನು , ಲವ್  ಅಂದರೆ ಏನುಗೆಳೆತನ  ಅಂದರೆ ಏನು  ಎಂಬುದನ್ನ  ನಯವಾಗಿ  ಚೊಕ್ಕದಾಗಿ ತಿಳಿಸಿದ್ದಾರೆ  ಮತ್ತು ಅದರ ಅಂತರವನ್ನ ತೋರಿಸಿದ್ದಾರೆ . ಸಂಭಂಧಗಳ  ಅವಶ್ಯಕತೆಯನ್ನ  ಚಿತ್ರಿಸಿದ್ದಾರೆ.  ಒಟ್ಟಾರೆಯಾಗಿ ಸಿನಿಮಾದ  ನಿರೂಪಣೆ ನೋಡಿದರೆ  ಒಬ್ಬ  ಗೆಳೆಯನ ಸಲಹೆ ಪಡೆದಂತೆ. ನಿಮಗೊಬ್ಬ  ಗೆಳೆಯ ಸಿಕ್ಕಂತೆ .  ಎಲ್ಲೂ ಬೋರು ಹೊಡಿಸಲ್ಲ ,ನನ್ನ ಪ್ರಕಾರ  ನೋಡಬಹುದ್ದಾದ ಸಿನೆಮಾ ಎನ್ನುವುದಕ್ಕಿಂತ  ಮನೆ ಮಂದಿಗೆಲ್ಲ  ತೋರಿಸ ಬೇಕಾದ ಸಿನೆಮಾ . ಒಂದು ವರ್ಗಕ್ಕೆ ಮಾತ್ರ  ಸೀಮಿತ ವೆನ್ನದೆ  ಎಲ್ಲರಿಗೂ ಅನ್ವಯ ವಾಗುವ ಸಿನೆಮಾ .

 
 ಮೈ ರೇಟಿಂಗ್:   * * * * + / * * * * *



Comments